ನಮ್ಮ ಧ್ಯೇಯವಾಕ್ಯ

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಗೀತೆ

ವಿಶ್ವಮಾನವ ಗೀತೆ - ಅನಿಕೇತನ

ಓ ನನ್ನ ಚೇತನ, ಆಗು ನೀ ಅನಿಕೇತನ!

ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ, ಆಗು ನೀ ಅನಿಕೇತನ!
ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ವದೆಲ್ಲೆ ಮೀರಿ, ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ, ಆಗು ನೀ ಅನಿಕೇತನ!
ಎಲ್ಲಿಯೂ ನಿಲ್ಲದಿರು; ಮನೆಯನೆಂದೂ ಕಟ್ಟದಿರು;
ಕೊನೆಯನೆಂದೂ ಮುಟ್ಟದಿರು;
ಓ ಅನಂತವಾಗಿರು!
ಓ ನನ್ನ ಚೇತನ, ಆಗು ನೀ ಅನಿಕೇತನ!
ಅನಂತ ತಾನ್ ಅನಂತವಾಗಿ
ಆಗುತಿಹನೆ ನಿತ್ಯಯೋಗಿ;
ಅನಂತ ನೀ ಅನಂತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ, ಆಗು ನೀ ಅನಿಕೇತನ!    

     -ರಾಷ್ಟ್ರಕವಿ ಕುವೆಂಪು

Bengaluru City University's Anthem

The song of Universal Man

Be unhoused, O my soul!

Only the Infinite be your goal
Leave these myriad forms behind
Leave the million names that bind
A flash will pierce your heart and mind
And unhouse you, O my soul!
Winnow the chaff of a hundred creeds
Beyond these systems, hollow as reeds,
Turn unhorizoned where Truth leads;
To be unhoused, O my soul!
Stop not on the unending way.
Never build a house of clay.
The quest is endless. Night and day,
There can be no end to your play
When you are unhoused, O my soul!
The Infinite’s Yoga knows no end.
Endless the quest your apprehend
You will grow infinite and ascend
When you are unhoused, O my soul!

"ಸಾರ್ವತ್ರಿಕ ಮನುಷ್ಯನ ಹಾಡು" ಯ ಅನುವಾದ, ರಾಷ್ಟ್ರಕವಿ ಕುವೆಂಪು ಅವರ ಕವಿತೆ; ಪ್ರೊ. ವಿ ಕೆ ಗೋಕಾಕ್ ಅನುವಾದಿಸಿದ್ದಾರೆ;

ಮೂಲದಿಂದ - ಪುಷ್ಪಗೀತೆ - ಕುವೆಂಪು ಅವರ ಆಯ್ದ ಕವಿತೆಗಳು,

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ® ಕುಪ್ಪಳ್ಳಿ ಪ್ರಕಟಿಸಿದರು, ಆಗಸ್ಟ್ 2017 - ಪುಟ 120